ಇಡಯಿಲ್ಲಂ ಚಂದ್ರಶೇಖರನ್ (ಜನನ : ೨೬ ಡಿಸೆಂಬರ್ ೧೯೪೮) ಅವರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ರಾಜಕಾರಣಿ ಮತ್ತು ಪಿಣರಾಯಿ ವಿಜಯನ್ ಸರಕಾರದಲ್ಲಿ ಕೇರಳದ ಪ್ರಸ್ತುತ ಕಂದಾಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಪಿ. ಕುಞ್ಞಿರಾಮನ್ ನಾಯರ್ ಮತ್ತು ಎಡಯಿಲ್ಲಂ ಪಾರ್ವತಿ ಅಮ್ಮ ಅವರ ಪುತ್ರರಾಗಿ ಪೆರುಂಬಳದಲ್ಲಿ ಜನಿಸಿದರು. ಅವರು ಪ್ರಸ್ತುತ ೨೦೧೧ ರಿಂದ ಕಾಞ್ಞಂಗಾಡು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅದರ ಜೊತೆಯಲ್ಲಿ ಭಾರತೀಯ ಕಮ್ಯೂನಿಷ್ಟ್ (ಸಿಪಿಐ)‌ ಪಕ್ಷದ ಕೇರಳ ರಾಜ್ಯ ಸಮಿತಿಯ ಸದಸ್ಯನಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. == ಅವರು ಹೊಂದಿದ್ದ ಸ್ಥಾನಗಳು == ತಾಲ್ಲೂಕು ಕಾರ್ಯದರ್ಶಿ, ಎ. ಐ. ವೈ. ಎಫ್, ಕಾಸರಗೋಡು (೧೯೭೦) ಜಿಲ್ಲಾ ಕಾರ್ಯದರ್ಶಿ, ಎ. ಐ. ವೈ. ಎಫ್, ಕಣ್ಣೂರು (೧೯೭೫) ಸದಸ್ಯ, ಸಿಪಿಐ, ರಾಜ್ಯ ಮಂಡಳಿ (೧೯೭೬) ರಾಜ್ಯ ಜಂಟಿ ಕಾರ್ಯದರ್ಶಿ, ಎ. ಐ. ವೈ. ಎಫ್ (೧೯ ೭೯) ಸದಸ್ಯ, ಸಿಪಿಐ ಕಾಸರಗೋಡು ತಾಲ್ಲೂಕು ಸಮಿತಿ ಜಿಲ್ಲಾ ಸಚಿವಾಲಯದ ಸದಸ್ಯ, ಕಣ್ಣೂರು ಸದಸ್ಯ, ಚೆಮ್ಮನಾಡು ಗ್ರಾಮ ಪಂಚಾಯತ್ (೧೯೭೯-೮೪) ಸಹಾಯಕ ಜಿಲ್ಲಾ ಕಾರ್ಯದರ್ಶಿ, ಸಿಪಿಐ, ಕಾಸರಗೋಡು (೧೯೮೪) ಜಿಲ್ಲಾ ಕಾರ್ಯದರ್ಶಿ, ಸಿಪಿಐ (೧೯೮೭) ರಾಜ್ಯ ಕಾರ್ಯನಿರ್ವಾಹಕ ಸದಸ್ಯ, ಸಿಪಿಐ (೧೯೯೮) ಸದಸ್ಯ, ಕೇರಳ ರಾಜ್ಯ ಗ್ರಾಮ ಅಭಿವೃದ್ಧಿ ಮಂಡಳಿ (೧೯೮೭-೯೧) ನಿರ್ದೇಶಕ ಮಂಡಳಿ ಸದಸ್ಯ, ಕೇರಳ ಕೃಷಿ ಯಂತ್ರೋಪಕರಣಗಳ ನಿಗಮ (೧೯೯೧-೯೬) ಸದಸ್ಯ, ರಾಜ್ಯ ಭೂ ಸುಧಾರಣಾ ಪರಿಶೀಲನಾ ಸಮಿತಿ (೨೦೦೮-೨೦೧೦) == ಉಲ್ಲೇಖಗಳು ==